Wednesday, May 12, 2021

BRIDGE COURSE

8, 9 ಮತ್ತು 10 ನೇ ತರಗತಿ

ಸಮಾಜ ವಿಜ್ಞಾನ  ಸೇತುಬಂಧ ಪರಿಹಾರ ಭೋಧನೆ PPT ಮತ್ತು ನೋಟ್ಸ್ ಗಳು ಹಾಗೂ ದಾಖಲೆಗಳು

 

8th

9th

10th

 

ಸೇತುಬಂಧ ಪರಿಹಾರ ಭೋಧನೆ PPT

 

 

Download

 

Download

 

Download

 

PDF OF PPT

 

 

Download

 

Download

 

Download

 

ಸೇತುಬಂಧ ಪರಿಹಾರ ಭೋಧನೆ NOTES

 

 

Download

 

Download

 

Download

 

ಸೇತುಬಂಧ ದಾಖಲೆ

 

 

Download

 

 

Saturday, March 20, 2021

ಸವಿ ಪ್ರಕಾಶ ಮತ್ತು ಸವಿ ಪ್ರವೀಣ 10th SS

ಸವಿ ಪ್ರಕಾಶ


ಈ ಮೇಲಿನ link click ಮಾಡಿ ಈ ಕೆಳಗಿನವುಗಳನ್ನು ಪಡೆಯಿರಿ.

"ಸವಿ ಪ್ರಕಾಶ"
(ಆಯ್ದ 18 ಅದ್ಯಾಯಗಳು, 18 ಪುಟ)
ನಿಧಾನ ಕಲಿಕೆ ವಿದ್ಯಾರ್ಥಿಗಳಿಗೆ.

"ಸವಿ ಪ್ರವೀಣ"
(ಆಯ್ದ 25 ಅದ್ಯಾಯಗಳು, 25 ಪುಟ)
ಮಧ್ಯಮ ಕಲಿಕೆ ವಿದ್ಯಾರ್ಥಿಗಳಿಗೆ.

10 ನೇ ತರಗತಿ ಸಮಾಜ ವಿಜ್ಞಾನ ಪರೀಕ್ಷಾ ತಯಾರಿ ಸಾಹಿತ್ಯಗಳು.

ಕಳೆದ ವರ್ಷದ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಆಧರಿಸಿ  ಪ್ರಸ್ತುತ 2020-21 ನೇ ಸಾಲಿಗೆ ಕಡಿತಗೊಂಡ ಪಠ್ಯದ ಪ್ರಕಾರ ಆಯ್ದ ಅದ್ಯಾಯಗಳ ಸರಳ ಸಂಕ್ಷಿಪ್ತ ಪ್ರಶ್ನೋತ್ತರಗಳು.

ಇಂದ,
ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ. ಹೂವಿನ ಹಡಗಲಿ ಜಿ: ವಿಜಯನಗರ.

Saturday, July 25, 2020

ಲೇಖನ: ಹತ್ತರ ಗಮನ ಹತ್ತುವಾಗಲೇ ಇರಲಿ

                   "ಹತ್ತರ ಗಮನ ಹತ್ತುವಾಗಲೇ ಇರಲಿ"
                       (ಪ್ರೌಢ ಶಿಕ್ಷಣದ ಸವಾಲುಗಳ ಕುರಿತ ನನ್ನದೊಂದು ಲೇಖನ) - ಶ್ರೀನಿವಾಸ ಕಲಾಲ್
 
         ಮನೆ ಕಟ್ಟಬೇಕಾದರೆ ಭದ್ರ ಬುನಾದಿ ಹಾಕುತ್ತೇವೆ, ಛಾವಣಿ ಏರಬೇಕಾದರೆ ಏಣಿಯ ಹಲ್ಲುಗಳನ್ನು ಬಿಗಿ ಮಾಡಿಕೊಳ್ಳುತ್ತೇವೆ. ಉತ್ತಮ ಫಸಲು ಬರಲೆಂದು ನೆಲ ಹದಮಾಡಿ ಬಿತ್ತುತ್ತೇವೆ. ಆಶಿಕ್ಷಿತರೂ ಮಾಡಬಹುದಾದ ಈ ಕೆಲಸಗಳಲ್ಲಿ ಇರುವ ಕಾಮನ್ ಸೆನ್ಸ್ ಸುಶಿಕ್ಷಿತರ ಕ್ಷೇತ್ರದಲ್ಲಿ ಇರದೇ ಇರುವುದು ಎಷ್ಟು ನ್ಯಾಯ? ಇಲ್ಲಿ ನಾನು ಹೇಳುತ್ತಿರುವುದು ಪ್ರೌಢ ಶಾಲಾ ಶಿಕ್ಷಣದ ಸವಾಲುಗಳ ಕುರಿತು.
      ಪ್ರೌಢ ಶಾಲೆ ಎಂದರೆ ಎಂಟರಿಂದ ಹತ್ತನೇ ತರಗತಿ. ಈ ಹಂತದ ಶಿಕ್ಷಣದ ಗುರಿ, ಫಲಿತಾಂಶ, ಮತ್ತು ಗುಣಮಟ್ಟದ ಕುರಿತು ಮಾತನಾಡುವುದಾದದರೆ ಇತ್ತೀಚಿನ ದಿನಗಳಲ್ಲಿ ಶಾಲೆಯ 10ನೇ ತರಗತಿ ಫಲಿತಾಂಶವೇ ಮುಖ್ಯ ಕೇಂದ್ರ ಬಿಂದುವಾಗುತ್ತಿದೆ. ಪಾಲಕರು, ಶಿಕ್ಷಕರು ಸರಕಾರ, ಇಲಾಖೆ, ಅಧಿಕಾರಿಗಳು, ಮಾದ್ಯಮಗಳು ಆ ಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಎಷ್ಟು ಎಂಬ ಒಂದೇ ಪ್ರಶ್ನೆಯ ಉತ್ತರದಿಂದ ಆ ಶಾಲೆಯ ಗುಣಮಟ್ಟ ಅಳೆದುಬಿಡುತ್ತಾರೆ.
     ಸರಿ ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ ಒಂದು ಮಹತ್ವದ ಘಟ್ಟ, ಉನ್ನತ ವ್ಯಾಸಂಗಕ್ಕೆ ಹೋಗಬೇಕಾದರೆ ಇಲ್ಲಿ ಪಬ್ಲಿಕ್ ಪರೀಕ್ಷೆ ಎಂಬ ಸವಾಲು ಗೆಲ್ಲಬೇಕಾಗುತ್ತದೆ. ಆ ದಿಸೆಯಲ್ಲಿ ಈ ತರಗತಿಗೆ ಗಮನ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪಾಸ್ ಆಗಲು ಏನು ಮಾಡಬೇಕು, ಅದರ ಜವಾಬ್ದಾರಿ ಹೊತ್ತಿರುವವರು ಏನು ಮಾಡಬೇಕು ಎಂದಾಗ ನಾವೇ ಮಾಡಿಕೊಂಡಿರುವ ಈ ಮುಂದಿನ ಕ್ರಮಗಳು ಉತ್ತರವಾಗಿ ನಿಲ್ಲುತ್ತವೆ.
    10ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಹಲವು ಕ್ರಮಗಳು, 10ನೇ ತರಗತಿಗೆ ವಿಶೇಷ ತರಗತಿ, ಗುಂಪು ಅಧ್ಯಯನ, ಸರಣಿ ಪರೀಕ್ಷೆಗಳು, ಚಟುವಟಿಕೆಗಳು, ಫಲಿತಾಂಶ ವಿಶ್ಲೇಷಣೆಗಳು, ವರದಿಗಳು, ಕಾರ್ಯಾಗಾರಗಳು, ಪಾಸಿಂಗ್ ಪ್ಯಾಕೇಜ್ ಗಳು, ಬಹುನಿರೀಕ್ಷಿತ ಪ್ರಶ್ನೆಗಳು, ಮಾದರಿ ಪ್ರಶ್ನೆ ಪತ್ರಿಕೆಗಳು, ದತ್ತು ಯೋಜನೆ, ನಿರಂತರ ಪಾಲಕರ ಸಭೆಗಳು, ಮುಖ್ಯೋಪಾಧ್ಯಾಯರ ಸಬೆಗಳು, ಶಿಕ್ಷಕರ ಸಭೆಗಳು, ಪಾಲಕರ ಮನೆ ಭೇಟಿ (ಇದರಲ್ಲಿ ಬಹುತೇಕ ಕಾರ್ಯಕ್ರಮಗಳು ಡಿಸೆಂಬರ್, ಜನವರಿಯಲ್ಲಿ ಪ್ರಾರಂಭವಾಗುತ್ತವೆ) ಇನ್ನೂ ಹತ್ತು ಹಲವು ಕಾರ್ಯಕ್ರಮಗಳು ಕೇವಲ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಉತ್ತಮ ಫಲಿತಾಂಶಕ್ಕಾಗಿ. ತಪ್ಪಲ್ಲ ಬಿಡಿ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮ ವಾಗಬೇಕಲ್ಲ. ಆದರೆ ಇಷ್ಟೆಲ್ಲಾ ಕಾರ್ಯಕ್ರಮಗಳ ಹೊರತಾಗಿಯೂ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮವಾಗಿಲ್ಲ ಎಂಬುವುದನ್ನು ನಾವೆಲ್ಲಾ ಒಪ್ಪಕೊಳ್ಳಲೇಬೇಕು (ಫಲಿತಾಂಶದ ನೈಜತೆಯ ಜಾಣ ಕುರುಡುತನದ ಹೊರತಾಗಿ). ಹಾಗಾದರೇ ಹೀಗೇಕೆ? ಇದುವೇ ಒಂದು ಕಾಮನ್ ಸೆನ್ಸ್, ಬುನಾದಿ ಗಟ್ಟಿ ಇರದೇ ಮನೆ ಗಟ್ಟಿ ಇದ್ದೀತೆ? ಹದ ಮಾಡದೇ ಬಿತ್ತಿದ ಬೀಜ ಫಲ ನೀಡೀತೆ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಸ್ವಾಮಿ? ಅಂದರೆ ಮೂಲ ಕಲಿಕಾ ಸಾಮರ್ಥ್ಯಗಳಿರದ ಮಕ್ಕಳಿಗೆ ಉನ್ನತ ವಿಷಯ ಪರಿಕಲ್ಪನೆಗಳನ್ನು ತುರುಕಿ ಫಲಿತಾಂಶ ಪಡೆಯಲು ಸಮರೋಪಾದಿ ಕಾರ್ಯಕ್ರಮ ಮಾಡಿದಂತೆ.
     ಹಾಗಾದರೆ ಈ ಮೂಲ ಕಲಿಕಾ ಸಾಮರ್ಥ್ಯಗಳು ಇರದೇ ಇರಲು (ಎಸ್.ಎಸ್.ಎಲ್.ಸಿ ಹಂತಕ್ಕೆ ಬಂದಾಗ ಓದು ಬರಹವೂ ಬಾರದ ಮಕ್ಕಳು) ಕಾರಣ ಕೇಳಿದಾಗ ಪ್ರೌಢ ಶಾಲೆ ಶಿಕ್ಷಕರ ಉತ್ತರ ಪ್ರಾಥಮಿಕ ಶಾಲೆ, ಪ್ರಾಥಮಿಕ ಶಿಕ್ಷಕರ ಉತ್ತರ ಪಾಲಕರು, ವ್ಯವಸ್ಥೆ ಮತ್ತೊಂದು ಮಗದೊಂದು. ಕೆಲವರು ಹೇಳುವುದು ಹಾಜರಾತಿ ಕೊರತೆ, ಐಕ್ಯೂ ಕೊರತೆ, ಪಠ್ಯೇತರ ಕಾರ್ಯಗಳ ಭಾರ, ಸಿಲಬಸ್ ಹೊರೆ, ಪಾಲಕರ ನಿಷ್ಕಾಳಜಿ, ಅನಾರೋಗ್ಯ, ಬಡತನ, ಅದು ಇದು. ಹೌದು ಇವುಗಳನ್ನು ಒಪ್ಪಿಕೊಳ್ಲಲೇಬೇಕು(ಕೆಲ ಶಿಕ್ಷಕರ ಕರ್ತವ್ಯ ನಿಷ್ಟೆಯೂ ಇದಕ್ಕೆ ಸೇರಿಸಿ). ಎಲ್ಲರೂ ಇದನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಎಲ್ಲರೂ ಚಿಂತಿಸುತ್ತಾರೆ, ಎಲ್ಲರೂ ಈ ನಿಟ್ಟಿನಲ್ಲಿ ಗಮನಹರಿಸುತ್ತಾರೆ. ಆದರೆ ಗಮನ 10ಕ್ಕೆ ಬಂದಾಗ ಮಾತ್ರ. ಇದೇ ಗಮನ ಹತ್ತುವಾಗ ಏಕಿಲ್ಲ ಎಂಬುವುದು ನನ್ನ ಪ್ರಶ್ನೆ.
      ಎಲ್ಲಾ ಗೊತ್ತಿದ್ದು ಜಾಣ ಕಿವುಡರು, ಕುರುಡರಂತೆ ನಾವು ಎಂಟನೇ ತರಗತಿಗೆ ಬರುವಂತ ಮಕ್ಕಳಲ್ಲಿ ಕೇವಲ ಶೇಕಡಾ 20 ರಿಂದ 30 ವಿದ್ಯಾರ್ಥಿಗಳು ಮಾತ್ರ ಎಂಟು. ಒಂಬತ್ತು ಮತ್ತು ಹತ್ತರ ಸಿಲಬಸ್ ಕಾನ್ಸೆಪ್ಟ್ ಗಳನ್ನು ಅರ್ಥ ಮಾಡಿಕೊಳ್ಳಬಲ್ಲರು, ಓದಬಲ್ಲರು, ಬರೆಯಬಲ್ಲರು ಎಂದು ಗೊತ್ತಿದ್ದೂ ನಾವು ಮಾಡುವುದೇನು ಗೊತ್ತೇ ಹೇಗಿದ್ದರೂ ಎಂಟನೇ ತರಗತಿವರೆಗೂ ಕಡ್ಡಾಯ ಪಾಸ್, ಸಿಲಬಸ್ ಮುಗಿಸಿ ಪರೀಕ್ಷೆ ಮಾಡಿ ಪಾಸ್ ಮಾಡುವುದು. ಒಂಬತ್ತನೇ ತರಗತಿಯಲ್ಲಿ ಕಡ್ಡಾಯ ಪಾಸ್ ಇಲ್ಲದಿದ್ದರೂ ಆ ಹಂತಕ್ಕೆ ಏಕೆ ಬೇಕು ಬೇಸಿಕ್ಸ್ ಎಂದು ಸಿಲಬಸ್ ಕಂಟಿನ್ಯೂ ಮಾಡುತ್ತೇವೆ. ಇದಕ್ಕೊಂದು ಕಾರಣಾನೂ ಇದೆ (ಆದರೆ ಅದು ನಮ್ಮ ಸಮಾಧಾನಕ್ಕೆ ಮಾತ್ರ) ಅಧಿಕಾರಿಗಳು, ಪಾಲಕರು, ಮಾದ್ಯಮಗಳು ಈ ಎಂಟು ಮತ್ತು ಒಂಬತ್ತರ ಪ್ರಗತಿ ಬಗ್ಗೆ ಕೇಳುವುದಿಲ್ಲವಲ್ಲ ಎಂಬುವುದು.
      ಎಂಟನೇ ತರಗತಿಗೆ ಬರುವ ಮಕ್ಕಳ ಸಾಮರ್ಥ್ಯ ಗುರುತಿಸಿ ಕಲಿಕಾ ನ್ಯೂನ್ಯತಾ ಮಕ್ಕಳಿಗೆ ನಾವು ಗಮನ ಕೇಂದ್ರೀಕರಿಸಿ ಸಮರೋಪಾದಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಾಧ‍್ಯವೇ? ಸಾಧ್ಯವಿದೆ. ಹತ್ತರ ಗಮನ ಎಂಟಕ್ಕೆ ಬರಬೇಕಷ್ಟೆ. ಹತ್ತರ ಫಲಿತಾಂಶಕ್ಕೆ ಎಂಟರಿಂದಲೇ ತಯಾರಾಗಬೇಕು. ಹತ್ತಕ್ಕೆ ಮಾಡುವ ಹಾಜರಾತಿ ಸುಧಾರಣಾ ಕ್ರಮಗಳು, ವಿಶೇಷ ತರಗತಿಗಳು, ಗುಂಪು ಅಧ್ಯಯನಗಳು, ಪಾಲಕರ ಸಭೆಗಳು, ಶಿಕ್ಷಕರ ಸಭೆಗಳು ತರಬೇತಿ ಕಾರ್ಯಾಗಾರಗಳು, ಸೂಚನೆಗಳು, ವರದಿಗಳು ಎಂಟಕ್ಕೆ ಆಗಲಿ. ಮುಖ್ಯವಾಗಿ ಕಲಿಕಾ ನ್ಯೂನ್ಯತಾ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯಗಳನ್ನು ಬೆಳೆಸುವುದು ಈ ಎಲ್ಲಾ ಕಾರ್ಯಕ್ರಮಗಳ ಮುಖ್ಯ ಗುರಿಯಾಗಿರಲಿ.
         ಇದಕ್ಕಾಗಿ ಸೇತುಬಂಧ ಕಾರ್ಯಕ್ರಮ (ಅದು ಒಂದು ತಿಂಗಳ ಕಾರ್ಯಕ್ರಮ ಮಾತ್ರ) ಇದೆಯಲ್ಲ ಎಂದು ಹಲವರು ಕೇಳಬಹುದು. ಸೇತು ಬಂಧ ಮಾಡಿದ ನಂತರವೂ ಅದೇ ಸ್ಥಿತಿ ಮುಂದುವರೆಯುತ್ತದೆ. ಸೇತುಬಂಧದಿಂದಲೂ ಸಾಮರ್ಥ್ಯ ಗಳಿಸದ ಮಕ್ಕಳಿಗೆ ಏನು ಮಾಡಬಹುದು ಎಂಬುವುದು ಗಮನವಾಗಬೇಕು. ನಾನೊಮ್ಮೆ ನನ್ನ ಶಾಲೆಯಲ್ಲಿ ಮಾಡಿದ ಪ್ರಯೋಗ ಹೀಗಿದೆ. 8ನೇ ತರಗತಿಗೆ ಸೇತುಬಂಧ ಮಾಡಿದ ನಂತರ ಮೂಲ ಸಾಮರ್ಥ್ಯ ಗಳಿಸದ ಮಕ್ಕಳನ್ನು ಇತರೆ ಮಕ್ಕಳಿಂದ ಪ್ರತ್ಯೇಕಿಸಿ ಅವರಿಗಾಗಿ ಪ್ರತ್ಯೇಕ ತರಗತಿಯಲ್ಲಿ ವೇಳಾಪಟ್ಟಿಯೊಂದಿಗೆ ಕನ್ನಡ ಇಂಗ್ಲೀಷ್, ಹಿಂದಿ ಓದು ಬರಹ, ಸರಳ ಲೆಕ್ಕ ಮತ್ತು ಮಗ್ಗಿ ಕಲಿಸುವ ಕಾರ್ಯ ಸುಮಾರು ಮೂರು ತಿಂಗಳು ಮಾಡಿದೆ, ಆದರೆ ಇದಕ್ಕೆ ಸೂಕ್ತ ಯೋಜನೆ ಮತ್ತು ಸಿದ್ಧತೆ ನಾನು ಮಾಡಿಕೊಂಡಿರದ ಕಾರಣ (ಬೇರೆ ಕಾರಣವೂ ಇರಬಹುದು) ಸಂಪೂರ್ಣ ಯಶಸ್ಸು ಸಾಧಿಸಲಾಗಲಿಲ್ಲ. ಆದರೆ ಕೆಲವೊಂದು ಧನಾತ್ಮಕ ಅಂಶಗಳನ್ನು ನಾನು ಇದರಿಂದ ಗಮನಿಸಿದೆ, ಅವುಗಳೆಂದರೆ ಇತರ ಮಕ್ಕಳೊಂದಿಗೆ ತರಗತಿಯಲ್ಲಿ ಕುಳಿತಾಗ ಮೌನವಾಗಿರುತ್ತಿದ್ದ ಈ ಮಕ್ಕಳು ಪ್ರತ್ಯೇಕ ಮಾಡಿದಾಗ ಶಿಕ್ಷಕರೊಂದಿಗೆ ಸಂವಹನ ಮಾಡಲಾರಂಬಿಸಿದರು, ಅವರ ಮುಖದಲ್ಲಿ ಮಂದಹಾಸ ಕಂಡು ಬಂದಿತು. ಇಂತಹ ಹಲವು ಚಟುವಟಿಕೆಗಳು ಸೂಕ್ತ ಯೋಜನೆ, ಸಿದ್ಧತೆಯೊಂದಿಗೆ ಮಾಡುವುದೊಂದಿಗೆ ಎಂಟನೇ ತರಗತಿಯ ಕಲಿಕಾ ನ್ಯೂನತಾ ಮಕ್ಕಳ ಪಾಲಕ ಸಭೆಗಳನ್ನು ಪ್ರತಿ ತಿಂಗಳಿಗೊಮ್ಮೆ ನಡೆಸುವುದು. ಈ ಮಕ್ಕಳಗಾಗಿಯೇ ಸಿಲಬಸ್ ಹೊರತಾಗಿ ಕನಿಷ್ಟ ಮೂಲ ಸಾಮರ್ಥ್ಯಗಳು (ಇಲ್ಲಿ ಪ್ರತಿ ವಿಷಯದ ಕೆಲ ಬೆಸಿಕ್ಸ್ ಆದರೆ ಸಾಕು) ಉದಾಹರಣೆಗೆ ಮೂಲಾಕ್ಷರಗಳು, ಸರಳ ಪದಗಳ ರಚನೆ, ನಂತರ ಒತ್ತಕ್ಷರಗಳು ವಿಷಯಕ್ಕೆ ಸಂಬಂದಿಸಿದ ಪದಗಳು ನಂತರ ವಾಕ್ಯರಚನೆ, ಅಂಕಿ, ಸಂಖ್ಯೆ, ಮಗ್ಗಿ, ಸರಳ ಲೆಕ್ಕ ಒಳಗೊಂಡ ವಿಷಯ ಸಂಪನ್ಮೂಲಗಳ ರಚನೆಯಾಗಬೇಕು. ಇಲ್ಲಿ ಸ್ವಲ್ಪ ಈ ಮೂಲ ಸಾಮರ್ಥ್ಯ ಹೊಂದಿರುವ ಮಕ್ಕಳಿದ್ದು ಕೆಲ ಮೂಲ ವಿಷಯ ಪರಿಕಲ್ಪನೆಗಳು ಬಿಟ್ಟು ಹೋಗಿದ್ದರೆ ಅವರಿಗೆ ಆ ಪರಿಕಲ್ಪನೆಗಳನ್ನೊಳಗೊಂಡ ಸಂಕ್ಷಿಪ್ತವಾದ ಸಂಪನ್ಮೂಲ ರಚನೆಯಾಗಬೇಕು. ಈ ನಿಟ್ಟಿನಲ್ಲಿಯೂ ತರಬೇತಿ ಕಾರ್ಯಾಗಾರಗಳು ನಡೆಯಬೇಕು. ಈ ಮಕ್ಕಳಲ್ಲಿರುವ ಕೀಳರಿಮೆ ಹೂಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಲು ಇವರಿಗಾಗಿಯೇ ಪ್ರತ್ಯೇಕ ಪಠ್ಯೇತರ ಚಟುವಟಿಕೆಗಳಾಗಬೇಕು. ಇನ್ನು ಈ ಚಟುವಟಿಕೆಗಳ ಮೂಲಕ ಸಾಮರ್ಥ್ಯಗಳನ್ನು ಬೆಳೆಸುತ್ತಾ ನಿಧಾನವಾಗಿ ಇವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳಾಗಬೇಕು. ಇವೆಲ್ಲಾ ನಾವು ಎಂಟಕ್ಕೆ ಕೊಡುವ ಗಮನ, ಅಥವಾ ಹತ್ತರ ಗಮನ ಹತ್ತುವಾಗಲೇ ಎನ್ನಬಹುದು. (ಈ ಗಮನ ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೂ ಆದರಂತೂ ಇಡೀ ಶಿಕ್ಷಣ ವ್ಯವಸ್ಥೆಯಲ್ಲೇ ಒಂದು ಕ್ರಾಂತಿಯಾದಂತೆ).
         ಇಲ್ಲಿ ಸೂಚಿಸಿರುವ ಕೆಲ ಕ್ರಮಗಳು ಕೆಲವೊಮ್ಮೆ ಹಾಸ್ಯಾಸ್ಪದದಂತೆ ಕಾಣಬಹುದು ಉದಾಹರಣೆಗೆ ಪ್ರೌಢ ಶಾಲೆಯಲ್ಲಿ ಅ ಆ ಇ ಈ ಕಲಿಸುವುದೇ ಎಂದು. ಸ್ವಲ್ಪ ಯೋಚಿಸಿ ಹತ್ತನೇ ತರಗತಿ ಪರೀಕ್ಷೆ ಬರೆಯುವ ಮಗು ಅ ಆ ಇ ಈ (ಮೂಲಾಕ್ಷರಗಳು) ಓದಲಾರದ, ಬರೆಯಲಾರದ ಸ್ಥಿತಿಯಲ್ಲಿದ್ದಾನೆ ಎಂದರೆ (ವಾಸ್ತವವಾಗಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಈ ಸ್ಥಿತಿ ಇದೆ). ಅದಕ್ಕಿಂತಲೂ ದೊಡ್ಡ ಹಾಸ್ಯಾಸ್ಪದ ಬೇರಾವುದಿದೆ?
          ಹಾಗಾದರೆ ಇಲಾಖೆಯ ತಪ್ಪೇ? ಶಿಕ್ಷಕರ ತಪ್ಪೇ? ಪಾಲಕರ ತಪ್ಪೇ? ನನ್ನ ಪ್ರಕಾರ ಇಲಾಖೆಯು ಉನ್ನತ ಮಟ್ಟದಲ್ಲಿ ತಜ್ಞರನ್ನೊಳಗೊಂಡ ಅನೇಕ ಸಂಶೋಧನೆಗಳು ನಡೆಸಿ ಕಾಲಕಾಲಕ್ಕೆ ಹಲವು ಅತ್ಯತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಬಂದಿದೆ. ಉದಾಹರಣೆಗೆ ಒಂದರಿಂದ ಮೂರನೇ ತರಗತಿಗೆ ಇರುವ ನಲಿ ಕಲಿ ಯೋಜನೆ, ನಾಲ್ಕರಿಂದ ಹತ್ತನೇ ತರಗತಿ ವರೆಗೂ ಇರುವ ಸೇತುಬಂಧ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತ ಕಾರ್ಯಕ್ರಮಗಳು. ಆದರೆ ಇವುಗಳು ಸೂಕ್ತ ಅನುಷ್ಠಾನವಿಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಹಾಗಾದರೆ ಅನುಷ್ಠಾನದ ಜವಾಬ್ದಾರಿ ಯಾರದೆಂದರೆ ಅದು ಶಿಕ್ಷಕರದು. ಹಾಗಾದರೆ ಇಲ್ಲಿ ಶಿಕ್ಷಕರೇ ತಪ್ಪಿತಸ್ಥರೇ? (ಸಂಪೂರ್ಣವಾಗಿ ಅಲ್ಲ ಸ್ವಲ್ಪ ಹೌದು.) ಹಾಗಾದಾರೆ ಮುಖ್ಯ ಕಾರಣ ‘ಗಮನ’. ನಾವು ಇಡೀ ಶಿಕ್ಷಣದಲ್ಲಿ (ಪ್ರಾಥಮಿಕದಿಂದ ಪ್ರೌಢದವರೆಗೆ) ನಮ್ಮ ಗಮನ ಕೊಡುತ್ತಿರುವುದೇ ಹತ್ತನೇ ತರಗತಿಗೆ.
       ಒಂದರಿಂದ ಮೂರನೇ ತರಗತಿ ಮಗುವಿನ ಶಿಕ್ಷಣದ ಬಹು ಮುಖ್ಯ ಘಟ್ಟ ಎಂಬುದನ್ನು ನಾವೆಲ್ಲರೂ ಒಪ್ಪವುದಾದರೆ ಬಹುತೇಕ ಸಮಸ್ಯಗಳಿಗೆ ಪರಿಹಾರವಿದೆ. ನಾವು ಹತ್ತನೇ ತರಗತಿಗೆ ಕೊಡುವ ಪ್ರಾಮುಖ್ಯತೆಯ ಶೇ 50 ರಷ್ಟು ಈ ತರಗತಿಗಳಿಗೆ ನೀಡಿದರೆ ಸಾಕು. ಈ ಹಂತ ಮಗುವಿನಲ್ಲಿ ಆತ್ಮವಿಶ್ವಾಸ, ಆಸಕ್ತಿ ತುಂಬುವ ಹಂತ ಈ ಹಂತದಲೇ ಮಗುವಿನ ಆಸಕ್ತಿ ಆತ್ಮವಿಸ್ವಾಸ ಬಿದ್ದು ಹೋದರೆ ಮುಂದೆ ಅದನ್ನು ಮೇಲಕೆತ್ತುವುದು ಅಷ್ಟು ಸುಲಭದ ಕೆಲಸವಲ್ಲ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
        ಇದನ್ನೆಲ್ಲಾ ಪ್ರಯೋಗ ಮಾಡಿದ ಮೇಲೂ ಕೆಲ ವಿದ್ಯಾರ್ಥಿಗಳು ಈ ಹಂತದಲ್ಲಿ ಸುಧಾರಿಸಲಾರರು ಎಂಬ ವಾದವೂ ಬರಬಹುದು, ಇದೂ ಒಪ್ಪುವಂತಹದೇ, ಆದರೆ ಅವರಿಗೆ ಹಾಗೇ ಬಂದು ಹಾಗೇ ಹೋದರು ಎಂಬುದಕ್ಕಿಂತ ಜೀವನಾವಶ್ಯಕ ನಾಲ್ಕು ಕನ್ನಡ ಪದಗಳನ್ನಾದರೂ ಕಲಿತು ಹೋದರೆ ಶಿಕ್ಷಣ ಶಾಲೆಗಳಿಗೆ ಅವರು ಜೀವನ ಪರ್ಯಂತ ಋಣಿಯಾಗಿರುತ್ತಾರೆ.
ಸ್ನೇಹಿತರೇ ಆತ್ಮಾವಲೋಕನಕ್ಕೆ ಇನಷ್ಟು ವಿಚಾರಗಳಿವೆ ಒಂದರಿಂದ ಎಂಟರ ವರೆಗೆ ಕಡ್ಡಾಯ ಪಾಸ್ ನಿಯಮ ಸರ್ಕಾರಿ ಶಾಲೆ ಗಳ ಮೂಲಭೂತ ಸೌಕಾರ್ಯಗಳ ಕೊರತೆ (ಮುಖ್ಯವಾಗಿ ಶಿಕ್ಷಕರ ಕೊರತೆ) ಸಿಲಬಸ್ ಹೊರೆ, ಪಾಲಕರ ನಿಷ್ಕಾಳಜಿ, ಗೈರು ಹಾಜರಿ, ಇವುಗಳು ಇಲಾಖೆಯ ಉನ್ನತ ಮಟ್ಟದಲ್ಲಿ ಚರ್ಚೆಯಾಗಲಿ, ಇನ್ನು ಇಲಾಖೆಯ ಉಪಯುಕ್ತ ಕಾರ್ಯ ಕ್ರಮಗಳು ಪರಿಣಾಮಕಾರಿ ಅನುಷ್ಟಾನದ ಚರ್ಚೆ ನಮ್ಮ ಶಿಕ್ಷಕರ ಹಂತದಲ್ಲಾಗಲಿ. ಪ್ರತಿಯೊಂದಕ್ಕೆ ಪರಿಹಾರವಿದೆ. ಪ್ರತಿಯೊಂದು ಸಾದ್ಯ, ಇಚ್ಛಾಶಕ್ತಿ ಇರಬೇಕಷ್ಟೇ. ಮುಂದೊಂದು ದಿನ ಇಲಾಖೆ, ಸಮುದಾಯ ಈ ಹತ್ತರ ಗಮನ ಹತ್ತುವಾಗ ಅಂದರೆ ಕೆಳ ತರಗತಿಗಳಿಗೆ ಕೊಡಬಹುದು, ಆಗ ಎಲ್ಲಾದಕ್ಕೂ ಹೊಣೆಗಾರರು ನಾವಾಗುತ್ತೇವೆ ಅಂದರೆ ಶಿಕ್ಷಕರು
                                                                                                              - ಶ್ರೀನಿವಾಸ್ ಕಲಾಲ್, ಶಿಕ್ಷಕರು
                                                                                                                 ಸ.ಪ್ರೌ.ಶಾಲೆ ಬೂದನೂರು
                                                                                                                 ತಾ: ಹೂ.ಹಡಗಲಿ ಜಿ: ಬಳ್ಳಾರಿ 
                                                                                                                  9980875828